¡Sorpréndeme!

ಮೋದಿ ಹಾಗು ರಾಹುಲ್ ಗಾಂಧಿಯವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ | Oneindia Kannada

2017-12-18 1,194 Dailymotion

Twitterite compares the way Prime Minister Narendra Modi and AICC President Rahul Gandhi taking blessing from their mothers.


ಬಿಜೆಪಿ ಮತ್ತು ಕಾಂಗ್ರೆಸ್ ಅಭಿಮಾನಿಗಳು ಸದಾ ಒಂದಲ್ಲಾ ಒಂದು ವಿಚಾರವನ್ನು ಇಟ್ಟುಕೊಂಡು ಒಬ್ಬರು ಇನ್ನೊಬ್ಬರ ಕಾಲೆಳೆಯುವ ಕೆಲಸವನ್ನು ಮಾಡಿಕೊಂಡು ಬರುತ್ತಲೇ ಇದ್ದಾರೆ. ಕೆಲವೊಂದು ಆರೋಗ್ಯಕರ ಚರ್ಚೆಯಾದರೆ, ಬಹುತೇಕ ಬಾರಿ ಬೇಡವಾದ ಕಾರಣಕ್ಕೇ ಚರ್ಚೆಗಳು ನಡೆಯುತ್ತಿರುತ್ತವೆ. ಇಂತಹ ಬೇಡವಾದ ವಿಷಯವನ್ನು ಇಟ್ಟುಕೊಂಡು ಬಿಜೆಪಿ ಮತ್ತು ಕಾಂಗ್ರೆಸ್ ಟ್ವಿಟ್ಟರ್ ಬೆಂಬಲಿಗರು ಈಗ ಚರ್ಚೆ ನಡೆಸಲಾರಂಭಿಸಿದ್ದಾರೆ.ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ತನ್ನ ತಾಯಿ ಸೋನಿಯಾ ಗಾಂಧಿಗೆ ಪ್ರೀತಿಯ ಮುತ್ತನ್ನು ಇಟ್ಟು ಆಶೀರ್ವಾದ ಪಡೆದುಕೊಂಡಿದ್ದರು. ಈ ವಿಷಯವನ್ನು ಇಟ್ಟುಕೊಂಡು, ಮೋದಿ ತನ್ನ ತಾಯಿಯ ಬಳಿ ಆಶೀರ್ವಾದ ಪಡೆಯುವ ದೃಶ್ಯ ಮತ್ತು ರಾಹುಲ್ ಆಶೀರ್ವಾದ ಪಡೆಯುವ ಪದ್ದತಿಯನ್ನು ತಾಳೆಹಾಕಿ ಚರ್ಚೆ ನಡೆಯುತ್ತಿದೆ.ಮೋದಿ ತನ್ನ ತಾಯಿಯ ಪಾದಕ್ಕೆ ಎರಗಿ ಆಶೀರ್ವಾದ ಪಡೆಯುವ ಮತ್ತು ರಾಹುಲ್ ತನ್ನ ತಾಯಿಗೆ ಮುತ್ತು ನೀಡಿ ಅಶೀರ್ವಾದ ಪಡೆಯುವ ವಿಷಯವನ್ನಿಟ್ಟುಕೊಂಡು, 'ಇದೇನಾ ನಮ್ಮ ಸಂಸ್ಕೃತಿ' ಎನ್ನುವ ಅನಾವಶ್ಯಕ ಚರ್ಚೆ ನಡೆಯುತ್ತಿದೆ.